Sunday, April 19, 2026
Google search engine
Homeಕ್ರೈಂಸುಳ್ಳು ಹೇಳಿ ಅನಗತ್ಯ ಸನ್ನಿವೇಶಗಳಿಗೆ ಕಾರಣರಾದ ಸುಜಾತ ಭಟ್ ಅವರಿಗೆ ತಮ್ಮ ತಪ್ಪಿನ ಅರಿವಾಗಿದೆಯೇ?

ಸುಳ್ಳು ಹೇಳಿ ಅನಗತ್ಯ ಸನ್ನಿವೇಶಗಳಿಗೆ ಕಾರಣರಾದ ಸುಜಾತ ಭಟ್ ಅವರಿಗೆ ತಮ್ಮ ತಪ್ಪಿನ ಅರಿವಾಗಿದೆಯೇ?

ಬೆಂಗಳೂರು, ಆಗಸ್ಟ್ 27: ಅನನ್ಯಾ ಭಟ್ (Ananya Bhat) ನನ್ನ ಮಗಳು ಅಂತ ಸುಳ್ಳು ಹೇಳಿ ರಾಜ್ಯಾದಾದ್ಯಂತ ಭಾನಗಡಿ ಸೃಷ್ಟಿಸಿದ ಹಿರಿಯ ಮಹಿಳೆ ಸುಜಾತ ಭಟ್ ಅವರಿಗೆ ತಮ್ಮ ತಪ್ಪಿನ ಅರಿವು ಈಗ ಆದಂತಿದೆ. ಎಸ್ಐಟಿ ಅಧಿಕಾರಿಗಳು ಇಂದು ಬೆಳಗ್ಗೆಯಿಂದ ಅವರ ವಿಚಾರಣೆ ನಡೆಸುತ್ತಿದ್ದಾರೆ ಮತ್ತು ಮಧ್ಯಾಹ್ನದ ಊಟ ಕೂಡ ಅವರಿಗೆ ಎಸ್​ಐಟಿ ಠಾಣೆಯಲ್ಲೇ ಒದಗಿಸಲಾಗಿದೆ. ಎಸ್ಐಟಿ ರಚನೆಯಾದಾಗಿನಿಂದ ಮಾಧ್ಮಮಗಳ ಮುಂದೆ ಸ್ಥಿರವಲ್ಲದ ಹೇಳಿಕೆಗಳನ್ನು ನೀಡುತ್ತಾ ಜನರ ಶಂಕೆಗಳಿಗೆ ಈಡಾಗಿದ್ದ ಸುಜಾತ ಭಟ್ ತನಿಖಾ ತಂಡದ ಅಧಿಕಾರಿಗಳ ಎದುರು ತತ್ತರಿಸಿಹೋಗಿದ್ದಾರೆ ಎಂಬ ವದಂತಿಯಿದೆ. ಎಸ್​ಪಿ ಜಿತೇಂದ್ರ ಕುಮಾರ್ ದಯಾಮ ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡ ಸುಜಾತ ಅವರ ವಿಚಾರಣೆ ನಡೆಸುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments