ಇತ್ತೀಚೆಗಿನ ದಿನಗಳಲ್ಲಿ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳನ್ನು ಬಿಡಿಸುವತ್ತ ಎಲ್ಲರೂ ಗಮನ ಹರಿಸ್ತಾ ಇದ್ದಾರೆ. ಈ ಒಗಟಿನ ಆಟಗಳು ನಿಮ್ಮ ದೃಷ್ಟಿ ಮತ್ತು ಮೆದುಳಿಗೆ ಕೆಲಸ ನೀಡುತ್ತವೆ ಅನ್ನೋದೇನೋ ನಿಜ. ಆದರೆ ಕೆಲವೊಮ್ಮೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗದೇ ಇರಬಹುದು. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಚಿತ್ರದಲ್ಲಿ ಆಮೆಯೊಂದು ಅಡಗಿ ಕುಳಿತಿದ್ದು, ಉತ್ತಮ ದೃಷ್ಟಿ ಸಾಮರ್ಥ್ಯ ಹೊಂದಿರುವವರು ಆಮೆ ಎಲ್ಲಿದೆ ಎಂದು ಹುಡುಕಿ ಹೇಳ್ಬಹುದಾ.

ಆಪ್ಟಿಕಲ್ ಇಲ್ಯೂಷನ್ (Optical Illusion) ಹಾಗೂ ಬ್ರೈನ್ ಟೀಸರ್‌ನಂತಹ ಒಗಟಿನ ಆಟಗಳು ಬಿಡಿಸುವುದೆಂದರೆ ಬಹುತೇಕರಿಗೆ ಇಷ್ಟ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಇಂತಹ ಒಗಟಿನ ಚಿತ್ರಗಳನ್ನು ಕಂಡರೆ ಮಿಸ್ ಮಾಡೋದೇ ಇಲ್ಲ. ಈ ಚಿತ್ರಗಳು ನೀವೇಷ್ಟು ಬುದ್ಧಿವಂತರು ಹಾಗೂ ಯೋಚನಾ ಸಾಮರ್ಥ್ಯ ಎಷ್ಟಿದೆ ಎಂದು ಪರೀಕ್ಷಿಸುತ್ತದೆ. ಇದೀಗ ಕಣ್ಣಿನ ತೀಕ್ಷ್ಣತೆಗೆ ಸವಾಲೊಡ್ಡುವ ಒಗಟಿನ ಚಿತ್ರವೊಂದು ವೈರಲ್ ಆಗಿದೆ. ನೀರಿನಲ್ಲಿ ಆಮೆಯೊಂದು ಅಡಗಿ ಕುಳಿತಿದೆ. ಮರೆ ಮಾಡಲಾಗಿರುವ ಈ ಆಮೆಯನ್ನು ಹತ್ತೇ ಹತ್ತು ಸೆಕೆಂಡುಗಳ ಒಳಗೆ ಪತ್ತೆ ಹಚ್ಚಬೇಕು. ಈ ಸವಾಲನ್ನು ಸ್ವೀಕರಿಸಿ ಒಗಟು ಬಿಡಿಸಲು ರೆಡಿ ಇದ್ದೀರಾ.
ರೆಡ್ಡಿಟ್‌ನಲ್ಲಿ ಹಂಚಿಕೊಂಡ ಚಿತ್ರದಲ್ಲಿ ಏನಿದೆ?
r/FindTheSniper ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಹಸಿರು ಸಸ್ಯಗಳ ಜೊತೆಗೆ ಹರಡಿಕೊಂಡಿರುವ ಒಣಗಿದ ಕಂದು ಎಲೆಗಳ ತೇಪೆ, ನೀರನ್ನು ಕಾಣಬಹುದು. ಮೊದಲ ನೋಟಕ್ಕೆ ಸಹಜವಾಗಿ ಕಂಡರೂ ಈ ಚಿತ್ರದಲ್ಲಿ ಆಮೆಯೊಂದು ಅಡಗಿದೆ. ಎಷ್ಟು ಚೆನ್ನಾಗಿ ಮರೆಮಾಚಲಾಗಿದೆಯೆಂದರೆ ಅನುಭವಿ ಒಗಟನ್ನು ಬಿಡಿಸುವವರು ಈ ಆಟದಲ್ಲಿ ಸೋಲುತ್ತಾರೆ. ಈ ಒಗಟಿನ ಚಿತ್ರವನ್ನು ಬಿಡಿಸಲು ನಿಮಗಿರುವ ಕಾಲಾವಕಾಶ ಹತ್ತು ಸೆಕೆಂಡುಗಳು ಮಾತ್ರ ಎನ್ನುವುದು ತಲೆಯಲ್ಲಿರಲಿ. ಈ ಸವಾಲನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾದ್ರೆ ನೀವು ವೀಕ್ಷಣಾ ಕೌಶಲ್ಯವು ಅತ್ಯುತ್ತಮವಾಗಿದೆ ಎಂದರ್ಥ.


